Friday, April 13, 2018

ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆ


ಪ್ರಿಯರೆ,
     2018ರ ಏಪ್ರಿಲ್ 14ರ ಶನಿವಾರ ಸಂಜೆ  5.00ಕ್ಕೆ  ಬೆಂಗಳೂರಿನ  ಚಾಮರಾಜಪೇಟೆಯಲ್ಲಿರುವ​ ಕನ್ನಡ ಸಾಹಿತ್ಯ ಪರಿಷತ್ತಿನ ​ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ   ಡಾ. ಎನ್. ಗಾಯತ್ರಿಯವರು ಅನುವಾದಿಸಿರುವ ಶ್ರೀ  ಚಂದ್ರಕಾಂತ ಅಧಿಕಾರಿಯವರ ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆಯಾಗಲಿದೆ.  


ಶ್ರೀ ಮಾವಳ್ಳಿ  ಶಂಕರ್ ​ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ. ಜಿ. ರಾಮಕೃಷ್ಣ ಅವರ ಅಧ್ಯಕ್ಷತೆ.   

ಕೃತಿ ಪರಿಚಯ : ಶ್ರೀಮತಿ ಅನಸೂಯಾ ಕಾಂಬಳೆ
ಉಪಸ್ಥಿತಿ : ಶ್ರೀ ಶ್ರೀಪ್ರಕಾಶ್ ಅಧಿಕಾರಿ ಹಾಗೂ ಡಾ. ಎನ್. ಗಾಯತ್ರಿ     
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.​
  

ವಂದನೆಗಳು.
ಎ. ಆರ್. ಉಡುಪ


http://www.navakarnatakaonline.com/

Friday, March 2, 2018

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ


http://www.navakarnatakaonline.com/onti-setuve-an-autobiography-kondapalli-koteswaramma

http://www.navakarnatakaonline.com/allah-ninda-niraakrutaru-kannada

ನವಕರ್ನಾಟಕದ ಎರಡು ಪುಸ್ತಕಗಳು ಆಯ್ಕೆಯಾಗಿದೆ.
"ದತ್ತಿನಿ ಧಿಪುರಸ್ಕೃತರು"
ಸ. ರಘುನಾಥ ಅವರ 'ಒಂಟಿ ಸೇತುವೆ 'ಕೃತಿಗೆ ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ (ಅನುವಾದ -1 -ಸೃಜನಶೀಲ ಪ್ರಕಾರ)
"ಅತ್ಯುತ್ತಮ ಪುಸ್ತಕ ಬಹುಮಾನ ಪುರಸ್ಕೃತರು"
ಎಂ. ಅಬ್ದುಲ್‌ ರೆಹಮಾನ್‌ ಪಾಷ ಅವರ 'ಅಲ್ಲಾಹ್‌ನಿಂದ ನಿರಾಕೃತರು' ( ಅನುವಾದ 2-ಸೃಜನೇತರ )

Tuesday, February 27, 2018

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು " 2ನೆೇ ಮುದ್ರಣ

ಕೃತಿ ಕುರಿತು ಅಭಿಪ್ರಾಯ
ಪ್ರತಿ ಅಧ್ಯಾಯವೂ ವಿಜ್ಞಾನದ ಇತಿಹಾಸದಲ್ಲಿನ ಸಿಹಿ-ಕಹಿ ಕಥೆಗಳನ್ನು ಹೇಳುತ್ತದೆ: ವಿಜ್ಞಾನಿಗಳಲ್ಲಿ ವಿಶ್ವ ವಿಖ್ಯಾತರಾದವರೂ ಇದ್ದಾರೆ, ಜೀವ ಕಳೆದುಕೊಂಡವರೂ ಇದ್ದಾರೆ. ಭೌತ ವಿಜ್ಞಾನದಿಂದ ಹಿಡಿದು ರಸಾಯನ, ಜೀವ, ಭೂ, ಗಣಿತ, ಅಂತರಜಾಲ - ವಿಧಿ ವಿಜ್ಞಾನ ಕೂಡ – ಇವನ್ನೆಲ್ಲಾ ಕೂಡಿಸಿ, ಆ ವಿಷಯಗಳ ಮೇಲೆ ಮಾನವನ ಸಾಹಸ, ಆ ಸಾಹಸಗಳು ಸಾಧಿಸಿದ ವಿಜಯಗಳು, ಆ ವಿಜಯಗಳು ಹುಟ್ಟಿಸಿರುವ ವಿಸ್ಮಯ ಹಾಗೂ ಬೆರಗುಗಳನ್ನು ತಿಳಿಗನ್ನಡದಲ್ಲಿ ಕನ್ನಡದ ಜನತೆಗೆ ಅರ್ಪಿಸಿದ್ದಾರೆ. ಪುಸ್ತಕದ ಮೊದಲನೆ ಪುಟದಲ್ಲಿಯೇ ಎಚ್. ಆರ್. ಕೃಷ್ಣಮೂರ್ತಿಗಳು ಹೇಳಿರುವಂತೆ ಅಮೆರಿಕ ವಿಜ್ಞಾನಿ ರಿಚರ್ಡ್ ಫೈನ್‍ಮನ್ ಪ್ರಕಾರ ವಿಜ್ಞಾನವು ವಿಶ್ವದಲ್ಲಿ ನಡೆಯುತ್ತಿರುವ ಮಹಾ ಚದುರಂಗದಾಟದ ಗೂಢ, ಗುಪ್ತ ನಿಯಮಗಳನ್ನು ಕಂಡು ಹಿಡಿಯುವ ಸಾಹಸ. ಈ ಸಾಹಸದ ಹತ್ತಾರು ಕಥೆಗಳೇ ಈ ಪುಸ್ತಕದ ರಮ್ಯವಾದ ವಸ್ತು.
                                                                            - ಪ್ರೊ|| ರೊದ್ದಂ ನರಸಿಂಹ, ಖ್ಯಾತ ವಿಜ್ಞಾನಿ.

http://www.navakarnatakaonline.com/vijnanada-heddariyalli-mahatiruvugalu

Monday, February 19, 2018

"ಪ್ರಾಣಾಯಾಮ ಪ್ರಕಾಶಿಕಾ" ಪುಸ್ತಕ ಲೋಕಾರ್ಪಣೆ

ಪ್ರಿಯರೇ,
2018 ಫೆಬ್ರವರಿ 24ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಟಿಸಿರುವ ಯೋಗರತ್ನ ಡಾ. ಎಸ್ ಎನ್ ಓಂಕಾರ್ ಅವರ "ಪ್ರಾಣಾಯಾಮ ಪ್ರಕಾಶಿಕಾ" ಪುಸ್ತಕ ಲೋಕಾರ್ಪಣೆ ಮಾಡಲಾಗುವುದು. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ. ಇದನ್ನು ನಿಮ್ಮ ಗೆಳೆಯರಿಗೂ ತಿಳಿಸಿ ಅವರನ್ನೂ ಕರೆತನ್ನಿ.
http://www.navakarnatakaonline.com/praanaayaama-prakaashikaa

Tuesday, February 6, 2018

ಫೆಬ್ರವರಿ 2018 ರ 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಬೇದ್ರೆ ಮಂಜುನಾಥ ನವರ ಲೇಖನ

ಫೆಬ್ರವರಿ 2018 ರ 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆ.
ಬೇದ್ರೆ ಮಂಜುನಾಥ ನವರ ಲೇಖನ "ಖಗೋಳ ವಿಸ್ಮಯಗಳ ಅಧ್ಯಯನಕ್ಕೆ ಪೂರಕ ಆಕಾಶ ವೀಕ್ಷಣೆ - ಗ್ರಹ ತಾರೆಗಳ ಮಾಹಿತಿ"
ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯುಪಯುಕ್ತ ನವಕರ್ನಾಟಕ ಪುಸ್ತಕಗಳು ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://wwwhttp://www.navakarnatakaonline.com/bookslist?scid=430&val=1.navakarnatakaonline.com/bookslist?scid=430&val=1

http://www.navakarnatakaonline.com/bookslist?scid=430&val=1 
http://www.navakarnatakaonline.com/bookslist?scid=430&val=1
http://www.navakarnatakaonline.com/bookslist?scid=430&val=1

Thursday, December 21, 2017

"ಥಟ್ ಅಂತ ಹೇಳಿ"...? ಕಾರ್ಯಕ್ರಮದಲ್ಲಿ "ಇಹದ ಪರಿಮಳ : ಕಥಾಸಂಕಲನ" ಕೃತಿಯ ಪರಿಚಯ


ಚಂದನ ವಾಹಿನಿ ಪ್ರಸಾರ ಮಾಡುವ "ಥಟ್ ಅಂತ ಹೇಳಿ"...? ಕಾರ್ಯಕ್ರಮದಲ್ಲಿ ಡಾ. ನಾ.
ಸೋಮೇಶ್ವರ ಅವರು ಕಂನಾಡಿಗಾ ನಾರಾಯಣ ಅವರ ಇತ್ತೀಚಿಗೆ ರಚಿಸಿರುವ "ಇಹದ ಪರಿಮಳ :
ಕಥಾಸಂಕಲನ" ಎಂಬ ಕೃತಿಯನ್ನು ಪರಿಚಯ ಮಾಡಿಕೊಟ್ಟರು.

Saturday, November 11, 2017

"ಕನ್ನಡ : ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ

೧೯ ನವೆಂಬರ್ ೨೦೧೭, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ, ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಕರ್ನಾಟಕ ಪ್ರಕಾಶನದ ಸಹಯೋಗದೊಡನೆ ಇ ಜ್ಞಾನ ಟ್ರಸ್ಟ್ ಪ್ರಸ್ತುತಪಡಿಸುವ "ಕನ್ನಡ : ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ, 'ನವಕರ್ನಾಟಕದ ಕನ್ನಡ ಕಲಿಕೆ ಮಾಲಿಕೆ' ಪುಸ್ತಕಗಳ ಅನಾವರಣ ಹಾಗು ಇ ಜ್ಞಾನ ಟ್ರಸ್ಟ್ ಜಾಲತಾಣದ ಲೋಕಾರ್ಪಣೆ ಮತ್ತು 'ಕಲಿಕೆಗೆ ಕೊಡುಗೆ' ಯೋಜನೆಯಡಿ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಗಳಿವೆ. ತಾವೆಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜ ಪೇಟೆ, ಬೆಂಗಳೂರು - ೫೬೦೦೧೮
http://www.navakarnatakaonline.com/

Wednesday, November 8, 2017

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ


"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ ೨೦೧೭ ನವೆಂಬರ್ ಟೀಚರ್ ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

www.navakarnatakaonline.com/vijnanada-heddariyalli-mahatiruvugalu-anantharamu
www.navakarnatakaonline.com/vijnanada-heddariyalli-mahatiruvugalu-anantharamu
www.navakarnatakaonline.com/vijnanada-heddariyalli-mahatiruvugalu-anantharamu

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ

  • "ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ ೨೦೧೭ ನವೆಂಬರ್ 'ಕಸ್ತೂರಿ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

  •  

Wednesday, October 25, 2017

ಭಾರತ ಕಮ್ಯುನಿಸ್ಟ್ ಪಕ್ಷ ಬೆಂಗಳೂರು ಜಿಲ್ಲಾ ಮಂಡಳಿ ಮತ್ತು ನವಕರ್ನಾಟಕ ಪ್ರಕಾಶನ ಜಂಟಿಯಾಗಿ ಏರ್ಪಡಿಸಿರುವ ಪುಸ್ತಕಗಳ ಲೋಕಾರ್ಪಣೆ.

ರಷ್ಯನ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಬೆಂಗಳೂರು ಜಿಲ್ಲಾ ಮಂಡಳಿ ಮತ್ತು ನವಕರ್ನಾಟಕ ಪ್ರಕಾಶನ ಜಂಟಿಯಾಗಿ ಏರ್ಪಡಿಸಿರುವ ಪುಸ್ತಕಗಳ ಲೋಕಾರ್ಪಣೆ.
2017ರ ನವೆಂಬರ್ 5ರ ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಘಾಟೆ ಭವನ, ಸಿ ಪಿ ಐ ಕಚೇರಿಯಲ್ಲಿ "ಜಗವ ನಡುಗಿಸಿದ ಹತ್ತು ದಿನ (ಜಾನ್ ರೀಡ್)" ಮತ್ತು "ಕುಟುಂಬ, ಸ್ನೇಹಿತರು ಮತ್ತು ದೇಶ (ನುಯೆನ್ ಧೀ ಬಿನ್)" ಕೃತಿಗಳನ್ನು ಲೋಕಾರ್ಪಣೆ ಮಾಡುವವರು ಡಾ. ಜಿ ರಾಮಕೃಷ್ಣ ಮತ್ತು ಡಾ. ವಸುಂಧರಾ ಭೂಪತಿ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
http://www.navakarnatakaonline.com/index

Wednesday, September 27, 2017

"ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ ೨೦೧೭"

ನವಕರ್ನಾಟಕ ಪ್ರಕಾಶನದ "ಕಿತ್ತಳೆ ನೇರಳೆ ಪೇರಳೆ" ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟ ಕೊಡಮಾಡುವ "ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ ೨೦೧೭" ಗೆ ಪಾತ್ರವಾಗಿದೆ.
http://www.navakarnatakaonline.com/kittale-nerale-perale-avasarakke-etukida-maatu-baraha

"ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?" ಕೃತಿಪರಿಚಯ


"ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?"
ಲೇಖಕರು:ಟಿ ಎಸ್ ಗೋಪಾಲ್.
ಪ್ರಕಾಶಕರು:ನವಕರ್ನಾಟಕ ಪ್ರಕಾಶನ.
ಪುಟ:೬೪,ಬೆಲೆ :ರೂ.೪೫.


ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಯಲ್ಲಿ ಪ್ರಕಟವಾಗಿರುವ ,ಟಿ.ಎಸ್ .ಗೋಪಾಲ್ ರವರು ಬರೆದಿರುವ, ಹಳಗನ್ನಡವನ್ನು ಓದಿ ತಿಳಿಯುವ ಸುಲಭೋಪಾಯಗಳನ್ನು ತಿಳಿಸುವ ಈ ಕೃತಿ ಕನ್ನಡ ಸಾಹಿತ್ಯಾಸಕ್ತರಿಗೆ ಹಳಗನ್ನಡ ಸಾಹಿತ್ಯದ ಮಹತ್ವವನ್ನೂ ಉಪಯುಕ್ತತೆಯನ್ನೂ ಅರ್ಥ ಮಾಡಿಸುವ ಸಾಧನವಾಗಿದೆ.
ಹಳಗನ್ನಡ ಕಾವ್ಯದ ಪ್ರಸ್ತುತತೆ,ವಿದ್ಯಾರ್ಥಿಗಳಿಗೆ,ಬೋಧಕರಿಗೆ,ಹಾಗೂ ಕಾವ್ಯಾಸ್ವಾದಕರಿಗೆ ಹೇಗೆ ಅಗತ್ಯ ಎಂಬುದರ ಪ್ರಸ್ತಾವನೆಗಳ ಮೂಲಕ ಕೃತಿ ಆರಂಭಗೊಂಡಿದೆ.ಹಳೆಗನ್ನಡದ ಪರಿಧಿಯಲ್ಲಿ ಪೂರ್ವದ ಹಳಗನ್ನಡ ,ಹಳಗನ್ನಡ ಹಾಗೂ ನಡುಗನ್ನಡ ಮುಂತಾದ ಕಾಲಘಟ್ಟಗಳನ್ನೂ ವ್ಯಾಪಕವಾಗಿ ಚರ್ಚಿಸಿ ನಿದರ್ಶನಗಳನ್ನು ನೀಡಿದ್ದಾರೆ ಲೇಖಕರು.
ಕನ್ನಡದ ಶಾಸನ ಪದ್ಯಗಳು,ಮೊದಲ ಗದ್ಯಕೃತಿ ವಡ್ಡಾರಾಧನೆ,ಕವಿರಾಜಮಾರ್ಗ,ಪಂಪಭಾರತ, ಗಧಾಯುದ್ಧ, ಕುಮಾರವ್ಯಾಸ ಭಾರತ,ಗಿರಿಜಾಕಲ್ಯಾಣ,ದುರ್ಗಸಿಂಹನ ಪಂಚತಂತ್ರ,ಜನ್ನನ ಅನಂತನಾಥ ಪುರಾಣ,ಮುಂತಾದ ಕೃತಿಗಳ ಪದ್ಯಗಳನ್ನು ವಿಭಕ್ತಿ ಪ್ರತ್ಯಯಗಳು,ಸರ್ವನಾಮಗಳು,ಕ್ರಿಯಾಪದಗಳು,ಭೂತ,ಭವಿಷ್ಯತ್ ವರ್ತಮಾನ ಕಾಲ,ಮುಂತಾದ ವ್ಯಾಕರಣ ಅಂಶಗಳ ವಿವರಣೆಗೆ ಸ್ವಾರಸ್ಯಕರವಾಗಿ ಬಳಸಿಕೊಳ್ಳಲಾಗಿದೆ.ಈ ಸಂಬಂಧ ನೀಡಿರುವ ಕೋಷ್ಟಕಗಳು ವಿಷಯದ ಸುಲಭಗ್ರಹಣಕ್ಕೆ ದಾರಿಮಾಡಿಕೊಟ್ಟಿವೆ.
ಹಳಗನ್ನಡ ಕಾವ್ಯ ಅರ್ಥ ಮಾಡಿಕೊಳ್ಳಲು ನಿಘಂಟು, ವ್ಯಾಕರಣ ಪುಸ್ತಕಗಳು ಸಹಾಯ ಮಾಡಿದರೂ ಸರಿಯಾಗಿ ಆಸ್ವಾದಿಸಲು ಸ್ವಂತ ಪರಿಶ್ರಮ ಬೇಕೆನ್ನುವುದು ಲೇಖಕರ ಅಭಿಮತ.
ಹಳೆಗನ್ನಡದ ಎಲ್ಲ ಮುಖ್ಯ ಕೃತಿಗಳನ್ನು ಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಮುಖ್ಯ ರಸಘಟ್ಟಗಳನ್ನಾದರೂ ಅರಿಯುವುದು ಅಗತ್ಯ ಎನ್ನುವ ಲೇಖಕರ ಕಳಕಳಿ ಖಂಡಿತ ಸ್ವೀಕಾರಾರ್ಹವಾದುದು.
ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಬರೆಯಲಾದ ಈ ಕೃತಿ ಬೋಧಕರಿಗೂ ಕಾವ್ಯಾಸ್ವಾದಕರಿಗೂ ಅಷ್ಟೇ ಉಪಯುಕ್ತ ಎಂಬುದು ಸತ್ಯ.
ತಮ್ಮ ಉಪಾಧ್ಯಾಯ ವೃತ್ತಿಯ ಸಾರವನ್ನು ಧಾರೆ ಎರೆದು ಕೃತಿ ರಚಿಸಿರುವ ಲೇಖಕ ಗೋಪಾಲ್ ರವರಿಗೆ ಅಭಿನಂದನೆಗಳು.ಹಾಗೆಯೇ ನವಕರ್ನಾಟಕ ಪ್ರಕಾಶನಕ್ಕೂ.
"ಕಿರಿದರೊಳ್ ಪಿರಿದರ್ಥ" ನೀಡುವ ಈ ಕೃತಿಯನ್ನು ಪಡೆಯಿರಿ, ಓದಿರಿ ಹಾಗೂ ಆನಂದಿಸಿರಿ.
ಮಹಾಬಲ
http://www.navakarnatakaonline.com/bookslist?aid=92

Monday, September 25, 2017

ಪ್ರಜಾವಾಣಿ > ಪುರವಣಿ > ಮುಕ್ತಛಂದ, 3 Sep, 2017

‘ಇದು ವಿಜ್ಞಾನದ ಬಾಗಿಲನ್ನು ಜನಸಾಮಾನ್ಯರಿಗೂ ತೆರೆಯುವ ಹೊತ್ತು’