Tuesday, May 8, 2012

 ನವಕರ್ನಾಟಕ ಪ್ರಕಾಶನದ ಮುಂದಿನ ಪ್ರಕಟಣೆ
ಭೀಮಾಯಣ - ಅಸ್ಪೃಶ್ಯತೆಯ ಅನುಭವಗಳು (ಭೀಮರಾವ್ ರಾಮಾಜಿ ಅಂಬೇಡ್ಕರ ಅವರ ಜೀವನದ ಘಟನೆಗಳು)


ಭಾರತದಲ್ಲಿ ಅಸ್ಪೃಶ್ಯನಾದವನಿಗೆ ಹೇಗನ್ನಿಸುತ್ತದೆ? ಕೆಲವು ಭಾರತೀಯರೇಕೆ ಇತರರನ್ನು ಸ್ಪರ್ಶಿಸಲು ಹೇಸುತ್ತಾರೆ? ಭೀಮರಾವ್ ರಾಮ್‌ಜೀ ಅಂಬೇಡ್ಕರರು(1895-1956)ದೇಶದ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿಗಳು, ಅಸ್ಪೃಶ್ಯನಾಗಿ ತಾವು ಬೆಳೆದು ಬಂದ ಅನುಭವಗಳನ್ನು ಮತ್ತು ನಿರಂತರವಾಗಿ ಎದುರಿಸಿದ ಜಾತಿ ಭೇದವನ್ನು ನೆನಪಿಸಿಕೊಂಡಿದ್ದಾರೆ. ಅವರ ಹತ್ತನೇ ವಯಸ್ಸಿನಲ್ಲಿ ಶಾಲೆಯಲ್ಲಿದ್ದಾಗ, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಂದ ಬಳಿಕ ಬರೋಡದಲ್ಲಿ: ತಾವು ಪ್ರಯಾಣಿಸುತ್ತಿದ್ದಾಗ, ಇತ್ಯಾದಿ ಸಂದರ್ಭಗಳಲ್ಲಿ. ಅನೇಕ ಸಂಕಷ್ಟಗಳನ್ನು ಎದುರಿಸಿ ಭಾರತದ ಸಂವಿಧಾನದ ಕರಡು ತಯಾರಿಸಿದರು. ಅನಂತರದ ದಿನಗಳಲ್ಲಿ ಬೌದ್ಧರಾದರು. ಅಂಬೇಡ್ಕರರ ಅನುಭವಗಳೇ ಭಾರತದ 170 ಮಿಲಿಯನ್ ದಲಿತರಿಗೆ ಇಂದೂ ಕಾಡುತ್ತಿವೆ. ಅವರಿಗೆ ನೀರನ್ನು ಕೊಡುವುದಿಲ್ಲ. ವಾಸಕ್ಕೆ ಸ್ಥಳವಿಲ್ಲ. ಜೀವನಾವಶ್ಯಕತೆಗಳ ಪೂರೈಕೆಯಿಲ್ಲ. ಈ ನೆಲನಡುಗಿಸುವ ಕೃತಿಯಲ್ಲಿ ಪಾರ್ಧಾನ್‌ಗೊಂಡ ಕಲಾವಿದರಾದ ದುರ್ಗಾಬಾಯಿ ವ್ಯಾಮ್ ಮತ್ತು ಸುಭಾಷ್ ವ್ಯಾಮ್‌ರವರು ಚಾರಿತ್ರಿಕ ಘಟನೆಗಳಾದ ಮಹಾಡ ಸತ್ಯಾಗ್ರಹವನ್ನು ಈಚಿನ ಘಟನೆಗಳ ಜೊತೆ ನೇಯುತ್ತಾರೆ. ಸಂಪ್ರದಾಯಬದ್ಧ ನಿರೂಪಣಾ ವ್ಯಾಕರಣವನ್ನೇ ಬದಿಗೆ ಸರಿಸಿ, ಚಿತ್ರಕಥೆಯಲ್ಲಿ ಹೊಸ ಚೈತನ್ಯ ತುಂಬಿದ್ದಾರೆ. ಅವರ ಮಾಂತ್ರಿಕ ಕಲೆಯು ಇಲ್ಲಿ ದೈತ್ಯಾಕಾರವಾಗಿ ಹೊರಹೊಮ್ಮಿದೆ. 

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ 

No comments:

Post a Comment