Tuesday, September 5, 2017

ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು

http://www.navakarnatakaonline.com/vijnanada-heddariyalli-mahatiruvugalu

ವಿಜ್ಞಾನದ ವಿವಿಧ ಕ್ಷೇತ್ರಗಳ ಚಾರಿತ್ರಿಕ ಬೆಳವಣಿಗೆಯ ಹಾಗೂ ಆ ಹಾದಿಯಲ್ಲಿ ಅದು ಪಡೆದುಕೊಂಡ ಮಹಾತಿರುವುಗಳ ದಾಖಲೆಯಾದ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಎಂಬ ವಿಶಿಷ್ಟ ಕೃತಿ ಇಂದು ಲೋಕಾರ್ಪಣೆಯಾಗುತ್ತಿದೆ.
ಭೌತ ವಿಜ್ಞಾನ, ಖಭೌತ ವಿಜ್ಞಾನ, ಅಂತರಿಕ್ಷ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ವೈದ್ಯ ವಿಜ್ಞಾನ, ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ಕೃಷಿ ವಿಜ್ಞಾನ, ಭೂವಿಜ್ಞಾನ, ಪರಿಸರ ವಿಜ್ಞಾನ, ಗಣಿತ, ಎಂಜಿನಿಯರಿಂಗ್ ತಂತ್ರಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಒಟ್ಟು 35 ಲೇಖನಗಳಿರುವ ಈ ಕೃತಿಯ ಸಂಪಾದಕರು ಡಾ. ಟಿ. ಆರ್. ಅನಂತರಾಮು. ಡಾ. ನಾ. ಸೋಮೇಶ್ವರ, ಶ್ರೀ ನಾಗೇಶ ಹೆಗಡೆ, ಪ್ರೊ. ಎಂ. ಆರ್. ನಾಗರಾಜು, ಡಾ. ಎಚ್. ಆರ್. ಕೃಷ್ಣಮೂರ್ತಿ, ಡಾ. ಬಿ. ಎಸ್. ಶೈಲಜಾ, ಡಾ. ಪಾಲಹಳ್ಳಿ ವಿಶ್ವನಾಥ್ ಸೇರಿದಂತೆ ಹಲವು ಕ್ಷೇತ್ರಗಳ ಒಟ್ಟು 25 ವಿಷಯ ಪರಿಣತರು - ವಿಜ್ಞಾನ ಬರಹಗಾರರು ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯ ಲೇಖಕರ ಸಾಲಿನಲ್ಲಿದ್ದಾರೆ.
ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರಿರುವ ಅಪೂರ್ವ ಸಂಶೋಧನೆಗಳ ಮತ್ತು ಅನ್ವೇಷಣೆಗಳ ಸರಳ ನಿರೂಪಣೆ ನೀಡುವ 568 ಪುಟಗಳ ಈ ಕೃತಿಯಲ್ಲಿ ಒಟ್ಟು 835 ಚಿತ್ರಗಳೂ, ಆರ್ಟ್ ಕಾಗದದಲ್ಲಿ ಮುದ್ರಣವಾಗಿರುವ 108 ಬಹುವರ್ಣದ ಪುಟಗಳೂ ಇವೆ. 1/4 ಕ್ರೌನ್ ಗಾತ್ರದಲ್ಲಿ ಮುದ್ರಣವಾಗಿರುವ ₹ 800 ಮುಖಬೆಲೆಯ ಈ ಪುಸ್ತಕವನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಡಾ. ಎ. ಎಸ್. ಕಿರಣ್‌ಕುಮಾರ್ ಲೋಕಾರ್ಪಣೆಗೊಳಿಸಲಿದ್ದಾರೆ. ಕತೆಗಾರ ಶ್ರೀ ವಸುಧೇಂದ್ರ ಪುಸ್ತಕದ ಪರಿಚಯ ಮಾಡಿಕೊಡುತ್ತಾರೆ.

No comments:

Post a Comment